ಹೊಸ ದಹಲಿ :–
ಯು ಪಿ ಐ(UPI) ಪಾವತಿಗಳ ಕುರಿತಾದ ವದಂತಿಗಳಿಗೆ ಹಣಕಾಸು ಸಚಿವಾಲಯ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದೆ.
ಜಿಎಸ್‌ಟಿ ಕೌನ್ಸಿಲ್ ಯುಪಿಐ ( UPI) ಮೂಲಕ ಮಾಡುವ ₹ ೨೦೦೦ ಕ್ಕಿಂತ ಹೆಚ್ಚಿನ ಪಾವತಿಗಳಿಗೆ ಜಿ ಎಸ್ ಟಿ ವಿಧಿಸಲು ಯೋಜಿಸುತ್ತಿಲ್ಲ ಎಂದು ಸಚಿವಾಲಯ ದೃಢಪಡಿಸಿದೆ.

ಒಂದು ಅಪ್ಲಿಕೇಶನ್ ಸೇವಾ ಶುಲ್ಕವನ್ನು ಸೇರಿಸಿದರೆ, ಆ ಭಾಗಕ್ಕೆ ಜಿಎಸ್ ಟಿ ವಿಧಿಸಬಹುದು
ಎಂದು ಸಚಿವಾಲಯ ಹೇಳಿದೆ.
ಈ ಹಿಂದೆಯೂ ಸಹ, ಅಂತಹ ವದಂತಿಗಳನ್ನು ಸಚಿವಾಲಯವು ತಳ್ಳಿಹಾಕಿತ್ತು.