೫ ದಿನಗಳ ಕಾಲ ಆಚರಿಸಲಾಗುವ ದೀಪಾವಳಿ ಹಬ್ಬದಲ್ಲಿ ಗೋಪೂಜೆಯೂ ಒಂದಾಗಿದ್ದು, ಕೆಲವೆಡೆ ಗೋವರ್ಧನ ಪೂಜೆಯೆಂದೂ ಆಚರಿಸಲಾಗುತ್ತದೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ದಿನದಂದು “ಶ್ರೀಕೃಷ್ಣ ಪರಮಾತ್ಮ ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಿನಲ್ಲಿ ಎತ್ತುವ ಮೂಲಕ” ಅಲ್ಲಿನ ಜನರನ್ನು ಮತ್ತು ಗೋವುಗಳನ್ನು ರಕ್ಷಸಿದನು ಎಂದು ಹೇಳಲಾಗುತ್ತದೆ.

ಸದರಿ ದಿನದಂದು ಗೋವುಗಳಿಗೆ ಗೌರವವನ್ನು ಸಲ್ಲಿಸುವ ದಿನವಾದ್ದರಿಂದ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವುದು ನಿಷಿದ್ಧ ಎಂಬ ನಂಬಿಕೆಯಿದೆ.





