ಬೆಳಗಾವಿ :–
ಹಲವು ವರ್ಷಗಳಿಂದ ಬೆಳಗಾವಿ ಚಳಿಗಾಲ ಅಧಿವೇಶನ ನಡೆದಿದೆ. ಅದೆಷ್ಟು ಉತ್ತರ ಕರ್ನಾಟಕದ ಪ್ರಶ್ನೆಗಳಿಗೆ ಉತ್ತರ, ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದು ಸರ್ಕಾರ ಮತ್ತ ವಿಪಕ್ಷಗಳು ತನ್ನನ್ನು ತಾನು ಕೇಳಿಕೊಳ್ಳಬೇಕು. ಈ ಬಾರಿಯು ಉತ್ತರ ಕರ್ನಾಟಕದ ಪ್ರಮುಖ ವಿಷಯಗಳ ಮೇಲೆ ಚರ್ಚೆಗಳು ನಡೆಯಲಿವೆ.
ಈ ವೇಳೆ ರಾಜ್ಯ ನಾಯಕತ್ವ ಕಿತ್ತಾಟ, ಕಾನೂನು ಸುವ್ಯವಸ್ಥೆ, ರೈತರ ಬೇಡಿಕೆ-ಸಮಸ್ಯೆಗಳು, ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ, ಅಭಿವೃದ್ಧಿಗೆ ಹಿನ್ನಡೆ, ಡಿಕೆಶಿ ದುಬಾರಿ ವಾಚ್ ಪ್ರಕರಣ, ಅನುದಾನ ಆರೋಪಗಳು, ಅಂಕಿ-ಸಂಖ್ಯೆ, ಪ್ರತ್ಯುತ್ತರಗಳ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುವ ನಿರೀಕ್ಷೆ ಇದೆ.
ಈ ವೇಳೆ ಸರ್ಕಾರ ಸುಮಾರು ೨೦ ವಿಧೇಯಕ ಮಂಡನೆಗೆ ಸಿದ್ಧತೆ ನಡೆದಿದೆ. ಜೊತೆಗೆ ಕಬ್ಬು ಬೆಳೆಗಾರರು ಸೇರಿದಂತೆ ವಿವಿಧ ರೈತರ ಬೇಡಿಕೆಗಳಿಗೆ ಈಡೇರಿಕೆಗಾಗಿ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟಿಸಲು ಸುಮಾರು ೮೯ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಈಹಿನ್ನೆಲೆಯಲ್ಲಿ ಪೊಲೀಸರು ಸುವರ್ಣಸೌಧ ಸುತ್ತಮುತ್ತ ಭಾರೀ ಬಿಗಿ ಭದ್ರತೆ ಒದಗಿಸಿದ್ದಾರೆ. ೬೦೦೦ ಪೊಲೀಸರನ್ನು ಇಲ್ಲಿ ನಿಯೋಜಿಸಲಾಗಿದೆ.
ಇತ್ತೀಚೆಗೆ ದೆಹಲಿ ಕೆಂಪುಕೋಟೆ ಬಳಿಯೇ ಸ್ಪೋಟ ಸಂಭವಿಸಿದ್ದರಿಂದ ಖಾಕಿ ಹೈಅಲರ್ಟ್ ಆಗಿದೆ. ಡಿಸೆಂಬರ್ ೧೯ ರವರೆಗೆ ಚಳಿಗಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ.





