“ದಿವಂಗತ ಬಿ ಆರ್ ಸಂಗಪ್ಪಗೋಳ ಅವರ ಜನ್ಮದಿನಾಚರಣೆ ಅಂಗವಾಗಿ ಮಜಲಟ್ಟಿ ಗ್ರಾಮದಲ್ಲಿ ರಕ್ತದಾನ ಶಿಬಿರವನ್ನು ಆಯೋಸಲಾಗಿತ್ತು”

“ಮಜಲಟ್ಟಿಯಲ್ಲಿ ರಕ್ತ ದಾನ ಶಿಭಿರ“


ಚಿಕ್ಕೋಡಿ :–

ಗ್ರಾಮೀಣ ಪ್ರಗತಿ ಶಿಕ್ಷಣ ಸಂಸ್ಥೆ ಮಜಲಟ್ಟಿ,
ಅಂಕುರ ಬ್ಲಡ್ ಬ್ಯಾಂಕ್ ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಸಹಕಾರಿ ಧುರೀಣ ಸಾಮಾಜಿಕ ಹೋರಾಟಗಾರರಾಗಿದ್ದ ದಿವಂಗತ ಬಿ ಆರ್ ಸಂಗಪ್ಪಗೋಳ ಅವರ 82ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿನ ಬಿ ಆರ್ ಎಸ್ ನರ್ಸಿಂಗ್ ಕಾಲೆಜ್ ನಲ್ಲಿ ಮಂಗಳವಾರ ರಕ್ತದಾನ ಶಿಬಿರವನ್ನು ಆಯೋಸಲಾಗಿತ್ತು

ರಕ್ತ ದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ “ವಿಜಯ ಸಂಗಪ್ಪಗೋಳ ಮಾತನಾಡಿ ಗ್ರಾಮೀಣ ಬಾಗದ ಯುವಕರಲ್ಲಿ ರಕ್ತ ದಾನ ಜಾಗ್ರತೆ ಮೂಡಿಸುವಲ್ಲಿ ಶಿಬಿರವನ್ನು ಆಯೂಜಿಸಿದ್ದು”
ರಕ್ತದಾನ ಮಾಡುವುದರಿಂದ ಇತರರ ಜೀವ ಉಳಿಸುವುದರ ಜೊತೆಗೆ, ಹೃದಯದ ಆರೋಗ್ಯ ಸುಧಾರಿಸುತ್ತದೆ, ಕಬ್ಬಿಣದ ಮಟ್ಟ ಸಮತೋಲನಗೊಳ್ಳುತ್ತದೆ, ಹೊಸ ರಕ್ತ ಕಣಗಳ ಉತ್ಪತ್ತಿಗೆ ಉತ್ತೇಜನ ನೀಡುತ್ತದೆ ಮತ್ತು ಒತ್ತಡ ಕಡಿಮೆ ಮಾಡಿ ಮಾನಸಿಕವಾಗಿ ಸಂತೃಪ್ತಿ ನೀಡುತ್ತದೆ ಎಂದು ಹೇಳಿದರು.
ಅತಿಥಿಯಾಗಿ ಮಾತನಾಡಿದ ಚಿಕ್ಕೋಡಿ ಲೋಕಸಭಾ ಸದಸ್ಯರ ಅಪ್ತಸಹಾಯಕ ರಾಮಕ್ರಷ್ಣ ಪಾನಬುಡೆ ಒಂದು ರಕ್ತದಾನದಿಂದ ಮೂರು ಜನರ ಜೀವಗಳನ್ನು ಉಳಿಸಬಹುದು
ರಕ್ತದಾನ ಮಾಡಿದ ನಂತರ ದೇಹವು ಹೊಸ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ ಇದು ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಎಂದರು.
ರಕ್ತದಾನ ಮಾಡಿದ ಸುಮಾರು ನಲವತ್ತಕೂ ಹೆಚ್ಚು ಯುವಕರಿಗೆ ಹೆಲ್ಮೆಟ್ ಗಳನ್ನು ಉಚಿತವಾಗಿ ನೀಡಲಾಯಿತು.
ಸಾಹಿತಿ ಎಸ್ ವಾಯ್ ಹಂಜಿ ಪ್ರಾಚಾರ್ಯ ದುಂಡಪ್ಪ ಮಾನೆಪ್ಪಗೋಳ ಸಂಸ್ಥೆಯ ಅದ್ಯಕ್ಷ ರುದ್ರಪ್ಪ ಸಂಗಪ್ಪಗೋಳ ವೀರಭದ್ರ ಸಂಗಪ್ಪಗೋಳ ಅಪ್ಪಣ್ಣ ನಾಯಿಕ ಶ್ರಿಧರ ಪಾಟೀಲ ಅಪ್ಪಾಸಾಹೇಬ ಸನದಿ
ಅರವಿಂದ ಮಾದರ ಶ್ರೀ ಕಾಂತ ಬೆಂಡವಾಡೆ ಸುಭಾಷ ಕರೋಲಿ ಸ್ವಪ್ನಿಲ್ ಪಾಟೀಲ ಶ್ರತಿ ವಿಜಯ ಸಂಗಪ್ಪಗೋಳ ಕವಿತಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page