“ತಾಲೂಕ  ಪಂಚಾಯತ ಸಹಾಯಕ ನಿರ್ದೇಶಕರಾದ ಶಿವಾನಂದ ಶಿರಗಾಂವೆ ರವರು ಜೈನಾಪೂರ ಗ್ರಾಪಂ ಯ ಕಾಯಕ ಗ್ರಾಮಕ್ಕೆ ಬೇಟಿ”

ಚಿಕ್ಕೋಡಿ :–

ತಾಲೂಕ  ಪಂಚಾಯತ ಸಹಾಯಕ ನಿರ್ದೇಶಕರಾದ (ನರೇಗಾ ) ಶಿವಾನಂದ ಶಿರಗಾಂವೆ ರವರು ತಾಲೂಕಿನ ಜೈನಾಪೂರ ಗ್ರಾಪಂ ಯ ಕಾಯಕ ಗ್ರಾಮಕ್ಕೆ ಬೇಟಿ ನೀಡಿ ಗ್ರಾಮ ಪಂಚಾಯತ್ ಕಟ್ಟಡ, ಅರಿವು ಕೇಂದ್ರ, ಬಾಪುಜೀ ಸೇವಾ ಕೇಂದ್ರ, ರಸ್ತೆ, ಕುಡಿಯುವ ನೀರು, ಶುದ್ಧ ಕುಡಿಯುವ ನೀರಿನ ಘಟಕ, ಆಸ್ಪತ್ರೆ, ಶಾಲೆ, ಅಂಗನವಾಡಿ ಕೇಂದ್ರಗಳು, ಕೂಸಿನ, ಮನೆ ಬಸ್ ನಿಲ್ದಾಣ, ಅಂಗವಿಕಲರ ಸ್ನೇಹ ಶೌಚಾಲಯ, ಶಾಲೆಯ ಬಾಲಕರ ಮತ್ತು ಬಾಲಕಿಯರ ಶೌಚಾಲಯ, ಶಾಲಾ ಕಂಪೌಂಡ್,  ಹಾಗೂ ಸ್ಮಾರ್ಟ್ ಕ್ಲಾಸ್ ಪರಿಶೀಲನೆ ಮಾಡಿ ತೋರಣಹಳ್ಳಿ ಸರಕಾರಿ ಶಾಲೆಯಲ್ಲಿ ಮಕ್ಕಳ ಜೊತೆ ಬಿಸಿ ಊಟ ಸೇವಿಸಿದರು.

ಯಾವ ಯಾವ ಯೋಜನೆ ರೂಪಿಸಬೇಕೆಂದು ತಿರ್ಮಾನಿಸಿ ನಿರ್ಣಯ ಕೖಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ 2025-26ನೇ ಸಾಲಿನ ಆಯವ್ಯಯಲ್ಲಿ ಘೋಷಿಸಿರುವಂತೆ ಹಾಗೂ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಇ-ಆಡಳಿತ ವಿಭಾಗವು ಸಿದ್ಧಪಡಿಸಿರುವ ಗ್ರಾಮ ಪಂಚಾಯತ ಕಾರ್ಯಕ್ಷಮತೆ ಶ್ರೇಯಾಂಕನಲ್ಲಿ ಹಿಂದುಳಿದಿರುವ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನ, ಗ್ರಾಮ ಪಂಚಾಯತಿ ಕಾರ್ಯನಿರ್ವಹಣೆ, ನಿಯಮಿತವಾಗಿ ವಿವಿಧ ಸಭೆಗಳ ಆಯೋಜನೆ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು “ಕಾಯಕ ಗ್ರಾಮ” ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿ.ಡಿ.ಓ ಶಿವಾನಂದ ಹಚ್ಚಡ, ಅಧ್ಯಕ್ಷರು, ಉಪಾಧ್ಯಕ್ಷರು  ಹಾಗೂ ಗ್ರಾಮ ಪಂ ಸದಸ್ಯರು ಗ್ರಾಮ ಪಂಚಾಯತ ಸಿಬ್ಬಂದಿ  ಹಾಗೂ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page