ಚಿಕ್ಕೋಡಿ :–
ಪಟ್ಟಣದ ಹೊಸದಿಗಂತ ದಿನಪತ್ರಿಕೆಯ ವರದಿಗಾರರಾದ ವಿಮಲಾ ಸಿ ಚಿನಕೇಕರ ಬೆಳಗಾವಿ ನಗರದ ಸಾರ್ವಜನಿಕ ಗ್ರಂಥಾಲಯದ 2025ನೇ ಸಾಲಿನ “ಪ್ರೊ. ಎಸ್ ಆರ್ ಜೋಗ್ ಉತ್ತಮ ಮಹಿಳಾ ಕನ್ನಡ ಪತ್ರಕರ್ತೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ನಗದು ಮೊತ್ತ, ಪ್ರಮಾಣ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಜ.18ರಂದು ಸಂಜೆ 5.30ಕ್ಕೆ ಬೆಳಗಾವಿ ನಗರದ ಗೋವಾವೇಸ್ ನ ಖಾನಾಪೂರ ರಸ್ತೆಯಲ್ಲಿರುವ ಮರಾಠಾ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.





