₹2,000ಕ್ಕಿಂತ ಹೆಚ್ಚಿನ ಮೌಲ್ಯದ ‘ವ್ಯಕ್ತಿಯಿಂದ ವ್ಯಾಪಾರಿಗೆ’ (P2M) ನಡೆಯುವ ವಹಿವಾಟುಗಳ ಮೇಲೆ ಶೇ.0.4ರಷ್ಟು ‘ಮರ್ಚೆಂಟ್ ಡಿಸ್ಕೊಂಟ್ ರೇಟ್'(MDR) ವಿಧಿಸುವುದಾಗಿ ಹಣಕಾಸು ಸಚಿವಾಲ ತಿಳಿಸಿದೆ. ₹75,000 ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಪಾವತಿಗಳಿಗೆ MDR ಪ್ರತಿ ವಹಿವಾಟಿಗೆ ಗರಿಷ್ಠ ₹300ಕ್ಕೆ ಸೀಮಿತಗೊಳಿಸಲಾಗಿದೆ. ಈ ಕಮಿಷನ್ ಮೊತ್ತ ಬ್ಯಾಂಕ್, ಆ್ಯಪ್ ಒದಗಿಸುವ ಸಂಸ್ಥೆಗಳ ನಡುವೆ ಹಂಚಿಕೊಳ್ಳಲಾಗುವುದು. ವ್ಯಕ್ತಿಗಳ ನಡುವೆ ನಡೆಯುವ ಪಾವತಿ ವಹಿವಾಟುಗಳು ಉಚಿತವಾಗಿ ಮುಂದುವರಿಯಲಿವೆ.





