
ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಕಚೇರಿಯಲ್ಲಿ ಪ್ರವಾಹ ಪೀಡಿತ ಮಹಿಳೆಯರಿಗೆ ಕೀಟ್ ವಿತರಣೆ
ಚಿಕ್ಕೋಡಿ :– ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಚಿಕ್ಕೋಡಿ ವತಿಯಿಂದ ಮಹಿಳೆಯರು ಆರ್ಥಿಕತೆ ಲಾಭ ಪಡೆದುಕೊಂಡು ಸ್ವಾವಲಂಬನೆ ಬದಕು ಕಟ್ಟಿಕೊಳ್ಳುವಂತೆ ಫಾದರ ಪೀಟರ ಹೇಳಿದರು. ಪಟ್ಟಣದಲ್ಲಿರುವ ಸಾಯಿಮಂದಿರ ಬಳಿ ಇರುವ ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಕಚೇರಿಯಲ್ಲಿ ಪ್ರವಾಹ ಪೀಡಿತ ಮಹಿಳೆಯರಿಗೆ ಕೀಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಕಳೆದ 20 ವರ್ಷಗಳಿಂದ ಸಮಾಜದ ಕಟ್ಟ ಕಡೆಯ ಮಹಿಳೆಯರ ಸಂಕಷ್ಟಗಳಿಗೆ ಸ್ಪಂದನೆ ಮಾಡುವ ಕಾರ್ಯ ಮಾಡುತ್ತಿದೆ ಎಂದರು.